ಫೆಬ್ರವರಿ ೨೦೧೯ ರಲ್ಲಿ, ಭಾರತದ ಕರ್ನಾಟಕ ರಾಜ್ಯದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಾದ್ಯಂತ ಹಲವಾರು ಸ್ಥಳಗಳಲ್ಲಿ ಭಾರೀ ಕಾಡ್ಗಿಚ್ಚುಗಳು ಸಂಭವಿಸಿದವು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಬೆಂಕಿಯಿಂದ ಹಾನಿಗೊಳಗಾದ ಒಟ್ಟು ಪ್ರದೇಶದ ಮೌಲ್ಯಮಾಪನವನ್ನು ನಡೆಸಿತು. ೨೧ ಫೆಬ್ರವರಿ ೨೦೧೯ ರಿಂದ ೨೫ ಫೆಬ್ರವರಿ ೨೦೧೯ ರವರ ವರೆಗೆ ಕಳೆದ ಐದು ದಿನಗಳಲ್ಲಿ ಸುಟ್ಟ ಪ್ರದೇಶದ ವಿಸ್ತೀರ್ಣವು ಸುಮಾರು ೧೦,೯೨೦ ಎಕರೆ ಎಂದು ಅಂದಾಜಿಸಿದೆ ೨೪ ಫೆಬ್ರವರಿ ೨೦೧೯ ರ ವೇಳೆಗೆ ದೊಡ್ಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತಾದರೂ, ಕೆಲವು ಪ್ರದೇಶಗಳಲ್ಲಿ ಉರಿಯುತ್ತಲೇ ಇತ್ತು. ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿ ಸುಮಾರು ೪೦ ಎಕರೆ ಪ್ರದೇಶದಲ್ಲಿ ಹಾನಿಯಾಯಿತು. ಇದು ಮತ್ತಷ್ಟು ಹರಡದಂತೆ ತಮಿಳುನಾಡು ಅರಣ್ಯ ಇಲಾಖೆ ಕ್ರಮ ಕೈಗೊಂಡಿತು. == ಹಿನ್ನೆಲೆ == ೨೧ ಫೆಬ್ರವರಿ ೨೦೧೯ ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತು. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಹಠಾತ್ ಹವಾಮಾನ ಬದಲಾವಣೆ ಮತ್ತು ಒಣ ಹುಲ್ಲು ಮತ್ತು ಲಂಟಾನ ಕ್ಷಿಪ್ರ ಬೆಳವಣಿಗೆಯಿಂದಾಗಿ ಬಂಡೀಪುರದಲ್ಲಿ ಕಾಡ್ಗಿಚ್ಚು ಮೊದಲ ಬಾರಿಗೆ ಕಾಣಿಸಿಕೊಂಡಿತು. ಉದ್ಯಾನದಲ್ಲಿ ಕಾಡೆಮ್ಮೆ, ಆನೆಗಳು, ಚಿರತೆ ಮತ್ತು ಹುಲಿಗಳಂತಹ ದೊಡ್ಡ ಸಸ್ತನಿಗಳ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಬಂಡೀಪುರ ಪ್ರದೇಶದಲ್ಲಿ ೧೯ ಸಾವಿರ ಎಕರೆ ಅರಣ್ಯ ನಾಶವಾಯಿತು. ಗಾಳಿಯಿಂದಾಗಿ ಬೆಂಕಿ ವೇಗವಾಗಿ ಹರಡುತ್ತಿದ್ದು, ಅಧಿಕಾರಿಗಳು ಗುಂಡ್ಲುಪೇಟೆ - ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದರು, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಯನ್ನೂ ರದ್ದುಗೊಳಿಸಲಾಗಿತ್ತು. ಬಲವಾದ ಗಾಳಿಯು ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಮತ್ತು ಸ್ವಯಂಸೇವಕರ ಕೆಲಸವನ್ನು ಹೆಚ್ಚು ಕಷ್ಟಕರವಾಗಿಸಿತು. ಕುಂದಕೆರೆ ಶ್ರೇಣಿಯನ್ನು ನಾಶಪಡಿಸಿದ ಬೆಂಕಿಯು ಬಾರಕಟ್ಟೆ ಮತ್ತು ಗುಡ್ಡಕೆರೆ, ನಂತರ ಹಿಮವತಿ ಗೋಪಾಲಸ್ವಾಮಿ ಬೆಟ್ಟಗಳಿಗೆ ವ್ಯಾಪಿಸಿತು. ಇದು ಜಾರ್ಕಲ್ ಕೆರೆ ಮತ್ತು ಗೌರಿಕಾಳು ಬೆಟ್ಟಗಳಲ್ಲಿನ ಕಾಡುಗಳನ್ನು ನಾಶಪಡಿಸಿತು. ಸಾವಿರಾರು ಮರಗಳ ಜೊತೆಗೆ ಅನೇಕ ಸಣ್ಣ ಸಸ್ತನಿಗಳು ಮತ್ತು ಸರೀಸೃಪಗಳು ಸತ್ತವು. ಹಿಂದಿನ ಎರಡು ವರ್ಷಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಯಾವುದೇ ಕಾಡ್ಗಿಚ್ಚಿನ ಘಟನೆಗಳು ಕಂಡುಬಂದಿರಲಿಲ್ಲ. == ಅಗ್ನಿಶಾಮಕ ಪ್ರಯತ್ನಗಳು == ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳಿಂದ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ೨೫ ಫೆಬ್ರವರಿ ೨೦೧೯ ರ ಮಧ್ಯಾಹ್ನ ಎರಡು -17 ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು. ೨೫ ಫೆಬ್ರವರಿ ೨೦೧೯ ರಂದು ಕಾರ್ಯಾಚರಣೆಯು ಪ್ರಾಥಮಿಕವಾಗಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗೋಪಾಲಸ್ವಾಮಿ ಬೆಟ್ಟಗಳ ಶ್ರೇಣಿಗೆ ಸೀಮಿತವಾಗಿತ್ತು. ಕುಂದಕೆರೆ ಮತ್ತು ಬಂಡೀಪುರ ಇತರ ಎರಡು ರೇಂಜ್‌ಗಳು ಗಂಭೀರವಾಗಿ ಪರಿಣಾಮ ಬೀರಿತ್ತು. ಆಗಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಭಾರತೀಯ ವಾಯುಪಡೆಯನ್ನು ಸಹಾಯಕ್ಕಾಗಿ ಕರೆದ ನಂತರ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತು. ಒಬ್ಬರು ಕರಡಿಕಲ್ ಬೆಟ್ಟದ ಸಾಲುಗಳತ್ತ ಸಾಗಿದರೆ ಮತ್ತೊಬ್ಬರು ಚಮ್ಮನ ಹಳ್ಳದ ಮೇಲಿನ ಸಾಮಾನ್ಯ ಪ್ರದೇಶದಲ್ಲಿ ಬೆಂಕಿಯನ್ನು ನಂದಿಸಿದರು. ಬೋಳಗುಡ್ಡ ಮತ್ತು ಕಣಿವೆ ದೇವಸ್ಥಾನದ ಪ್ರದೇಶಗಳು ಹೆಲಿಕಾಪ್ಟರ್ ಅಗ್ನಿಶಾಮಕ ನಿಯಂತ್ರಣಕ್ಕೆ ಒಳಪಟ್ಟಿವೆ ಒಟ್ಟು ೧೦ ಹೆಲಿಕಾಪ್ಟರ್‌ ಹಾರಿಸಲಾಯಿತು, ಸರಿಸುಮಾರು ೩೦,೦೦೦ ಲೀಟರ್ ನೀರನ್ನು ಬಿಡಲಾಗಿತ್ತು. == ಹಾನಿ ಮೌಲ್ಯಮಾಪನ == ಉಪಗ್ರಹ ಚಿತ್ರಗಳು ಕಾಡ್ಗಿಚ್ಚಿನಿಂದ ಉಂಟಾದ ಹಾನಿಯ ಪ್ರಮಾಣವನ್ನು ತೋರಿಸಿದವು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೈದರಾಬಾದ್‌ನ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಸೆಂಟಿನೆಲ್-2 ಉಪಗ್ರಹದ ದತ್ತಾಂಶವನ್ನು ಆಧರಿಸಿ ವರದಿಯನ್ನು ಬಿಡುಗಡೆ ಮಾಡಿತು, ಇದು ಬಂಡೀಪುರದಲ್ಲಿ ೨೩ ಫೆಬ್ರವರಿ ೨೦೧೯ ಮತ್ತು ೨೫ ಫೆಬ್ರವರಿ ೨೦೧೯ ರ ನಡುವೆ ೧೫,೪೪೩.೨೭ ಎಕರೆ ಅರಣ್ಯ ಪ್ರದೇಶವು ಬೆಂಕಿಯಿಂದ ಹಾನಿಯಾಗಿದೆ ಎಂದು ವರದಿ ಮಾಡಿತು. ಅರಣ್ಯ ಪ್ರದೇಶ ಮಾತ್ರ. ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನ ವನ್ಯಜೀವಿ ವಿಜ್ಞಾನಿ ಮೈಸೂರು ದೊರೆಸ್ವಾಮಿ ಮಧುಸೂದನ್, ಬಂಡೀಪುರದ (ಕಂದಾಯ ಭೂಮಿ) ಆಡಳಿತಾತ್ಮಕವಾಗಿ ಭಾಗದಲ್ಲಿ ಹಾನಿಯನ್ನು ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ ಹೊರತುಪಡಿಸಿದ ನಂತರ ೧೭,೦೦೦೦ ಎಕರೆ ಹಾನಿಗೊಳಗಾಗಬಹುದು ಎಂದು ಅಂದಾಜಿಸಿದ್ದಾರೆ. ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಅಂದಾಜಿಸಿರಲಿಲ್ಲ. ನಿಧಾನವಾಗಿ ಚಲಿಸುವ ಸಣ್ಣ ಪ್ರಾಣಿಗಳು, ಸರೀಸೃಪಗಳು ಕಾಟವನ್ನು ಅನುಭವಿಸಿದರೆ, ಚಿರತೆ ಮತ್ತು ಹುಲಿಗಳಂತಹ ದೊಡ್ಡ ಸಸ್ತನಿಗಳು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಓಡಿಹೋಗಿ ಹತ್ತಿರದ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ ಎಂದು ವನ್ಯಜೀವಿ ಅಧಿಕಾರಿಗಳು ಹೇಳುತ್ತಾರೆ. == ತನಿಖೆ == "ವಿಧ್ವಂಸಕ ಕೃತ್ಯ" ಬೆಂಕಿ ಶುರುವಾಗಲು ಕಾರಣ ಎಂದು ಕರ್ನಾಟಕದ ಉನ್ನತ ಅರಣ್ಯಾಧಿಕಾರಿ ಖಚಿತಪಡಿಸಿದರು. ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ಇಬ್ಬರು ಕುರಿಗಾಹಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು. ಬಂಡೀಪುರದಲ್ಲಿ ತಮ್ಮ ಜಾನುವಾರುಗಳ ಮೇಲೆ ಹುಲಿ ದಾಳಿಗೆ ಹೆದರಿ, ಫೆಬ್ರವರಿ ೨೨, ೨೦೧೯ ರಂದು ಅವರು ಸುಮಾರು ಒಂದು ತಿಂಗಳ ಕಾಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಓಡಿಸಲು ಬೆಂಕಿ ಹಚ್ಚಿದ್ದರು, ಇದು ಭಾರಿ ಬೆಂಕಿಗೆ ಕಾರಣವಾಯಿತು, ಇದು ಬಂಡೀಪುರ ಅರಣ್ಯ ಪ್ರದೇಶವನ್ನು ನಾಶಪಡಿಸಿತು. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ರ ಭಾರತೀಯ ಸೆಕ್ಷನ್ ೨೭, ೨೯, ೩೦, ೩೧, ೪೦, ೫೦ ಮತ್ತು ೫೧ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. == ಚಿತ್ರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==